ಊರು: ಬೆಂಗಳೂರು
ಜನನ : ಸುಮಾರು ೧೮೭೫
ಮರಣ : ಸುಮಾರು ೧೯೬೩
ತಂದೆ: ಕೃಷ್ಣಶಾಸ್ತ್ರಿ. ತಾಯಿ: ನಂಜಮ್ಮ.
ಸಂಸ್ಕೃತ ಕನ್ನಡ ಭಾಷೆಗಳಲ್ಲಿ ವಿದ್ವಾಂಸರಾಗಿದ್ದರು. ಮದ್ರಾಸ್ ವಿಶ್ವವಿದ್ಯಾನಿಲಯದ ವಿದ್ವಾನ್ ಪರೀಕ್ಷೆಯಲ್ಲಿ ಉಚ್ಚವರ್ಗದಲ್ಲಿ ಪಾಸಾದ ನಂತರ ಕೆಲವು ವರ್ಷ ಬೆಂಗಳೂರಿನ ಸೇಂಟ್ ಜೋಸೆಫ಼್ ಕಾಲೇಜಿನಲ್ಲಿ ಕನ್ನಡ ಪಂಡಿತರಾಗಿದ್ದರು. ೧೯೧೬ರಲ್ಲಿ ಅನಂತಪುರದ ಸರಕಾರೀ ಕಾಲೇಜನ್ನು ಸೇರಿದರು. ೧೯೨೦ರಲ್ಲಿ ಮದ್ರಾಸು ಸರ್ಕಾರದ ಪ್ರಾಚ್ಯಕೋಶಾಗಾರದಲ್ಲಿ ಉಪಗ್ರಂಥಾಲಯಾಧಿಕಾರಿಯಾದರು. ಶೃಂಗೇರಿಯ ಶಿವಗಂಗಾ ಸಂಸ್ಥಾನದಿಂದ 'ಸಾಹಿತ್ಯರತ್ನ' ಎಂಬ ಪ್ರಶಸ್ತಿಯನ್ನು ಪಡೆದಿದ್ದರು. ಭಾಸಕವಿಯ ಹಲವು ನಾಟಕಗಳನ್ನು ಕನ್ನಡಿಸಿದ್ದಾರೆ.
ಗ್ರಂಥಗಳು