ಜನನ : ೩-೪-೧೮೭೬
ಮರಣ : ೮.೫.೧೯೪೩
ತಂದೆ ಮಂಜುನಾಥಯ್ಯ, ತಾಯಿ ರಮಾಬಾಯಿ. ಜನಿಸಿದ್ದು ಮುಲ್ಕಿ, ಮಂಗಳೂರಿನಲ್ಲಿ.
ಪುತ್ತೂರಲ್ಲಿ ಶಾಲೆಯ ಶಿಕ್ಷಣವೂ ಮಂಗಳೂರು ಗವರ್ನ್‌ಮೆಂಟ್ ಕಾಲೇಜು ಹಾಗೂ ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪ್ರೌಢ ವ್ಯಾಸಂಗವೂ ಆಯಿತು. ೧೮೯೬ರಲ್ಲಿ ಇಡಿಯ ಮದ್ರಾಸ್ ಪ್ರಾಂತಕ್ಕೆ ಎರಡನೆಯವರಾಗಿ ಬಿ.ಏ. ಪರೀಕ್ಷೆಯಲ್ಲಿ ಉತ್ತೀರ್ಣರಾದರು. ೧೮೯೭ರಿಂದ ೧೯೦೦ರವರೆಗೆ ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಪಂಡಿತರಾಗಿದ್ದು, ಅದೇ ಸಮಯದಲ್ಲಿ Renaissance in Modern Kannada ಎಂಬ ಪ್ರಬಂಧದಿಂದ ಎಂ.ಏ. ಪದವಿಯನ್ನು ಸಂಪಾದಿಸಿದರು. ಬಳಿಕ ಎರಡು ವರ್ಷ ಮೈಸೂರು ಗವರ್ನ್‌ಮೆಂಟ್ ಟ್ರೇನಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕೆಲಸಮಾಡಿದರು.
ನಂತರ ೧೯೦೮ರಲ್ಲಿ ಮುಂಬಯಿ ಸರಕಾರದ ಭಾಷಾಂತರ ಶಾಖೆಯನ್ನು ಸೇರಿ ಎಂಟು ವರ್ಷ ಅಲ್ಲಿಯೇ ದುಡಿದರು. ೧೯೦೮ರಲ್ಲಿ ಎಲ್.ಎಲ್.ಬೀ. ಪದವೀಧರರಾದರು. ಜೊತೆಗೆ ಮರಾಠಿ, ಸಂಸ್ಕೃತ, ಜ್ಯೋತಿಷ್ಯ, ಆಯುರ್ವೇದ ಮುಂತಾದ ಸಾಹಿತ್ಯ ಶಾಸ್ತ್ರಗಳ ವ್ಯಾಸಂಗ ಮಾಡಿದರು.
೧೯೧೦ರ ಏಪ್ರಿಲ್‌ನಲ್ಲಿ ಮದ್ರಾಸ್ ಸರಕಾರದ ಭಾಷಾಂತರ ಶಾಖೆಗೆ ಬಂದು, ೧೯೧೭ರಲ್ಲಿ ಅಲ್ಲಿಯ ಮುಖ್ಯಾಧಿಕಾರಿಯಾದರು. ಮುಂದೆ ಆ ಸ್ಥಾನದಿಂದಲೇ ಸೇವಾ ನಿವೃತ್ತಿಯನ್ನು ಪಡೆದರು.
ಕನ್ನಡದ ನವೋದಯ ಕಾಲದಲಿ ಅತ್ಯಂತ ಶ್ರದ್ಧೆಯಿಂದ ದುಡಿದ ಮಹನೀಯರಲ್ಲಿ ಇವರೂ ಒಬ್ಬರು. 'ಕನ್ನಡವನುಳಿದೆನಗೆ ಅನ್ಯಜೀವನವಿಲ್ಲ' ಎಂಬ ಅವರ ಪದ್ಯವು ಆರಾಧ್ಯದೈವತದ ಬಗ್ಗೆ ಅವರಲ್ಲಿದ್ದ ಸರ್ವಸಮರ್ಪಣಭಾವವನ್ನು ಸೂಚಿಸುತ್ತದೆ. ಮಂಗಳೂರಲ್ಲಿ ಕಾಲೇಜು ವಿದ್ಯಾರ್ಥಿಯಾಗಿದ್ದಾಗ 'ಕರ್ಣಾಟಕ ವಿದ್ಯಾವರ್ಧಿನಿ ಸಂಘ' ಸ್ಥಾಪನೆಯಿಂದ ಮೊದಲ್ಗೊಂಡ ಇವರ ಕನ್ನಡ ಚಟುವಟಿಕೆಗಳು ವಿಧಾಯಕ ರೀತಿಯಲಿ ವಿಕಸಿತವಾದುವು. ಮದ್ರಾಸಿನ ಸ್ಕೂಲ್ ಬುಕ್ ಎಂಡ್ ಲಿಟರೇಚರ್ ಸೊಸೈಟಿಯ ಕನ್ನಡ ವಿಭಾಗ, ಮದ್ರಾಸ್ ಸರಕಾರದ ಸೈಂಟಿಫಿಕ್ ಟರ್ಮ್ಸ್ ಕಮಿಟಿ, ಓರಿಯೆಂಟಲ್ ಲೈಬರಿಯ ಸಲಹಾ ಸಮಿತಿ (೧೯೨೪), ಮದ್ರಾಸ್ ವಿಶ್ವವಿದ್ಯಾನಿಲಯದ ಸೆನೆಟ್, ಪಠ್ಯಪುಸ್ತಕ ಸಮಿತಿ ಮೊದಲಾದ ಮಂಡಲಗಳಲ್ಲಿ ಸದಸ್ಯರಾಗಿಯೂ ಕೆಲಸ ಮಾಡಿದರು. ಮದ್ರಾಸಿನ ಸುಗುಣವಿಲಾಸ ನಾಟಕ ಸಭೆಯ ಕನ್ನಡ ಶಾಖೆಯ ಕಾರ್ಯದರ್ಶಿಯಾಗಿಯೂ ಸುವಾಸಿನಿ (ಮಂಗಳೂರು) ಮತ್ತು ವಾಗ್ಭೂಷಣ (ಧಾರವಾಡ) ಪತ್ರಿಕೆಗಳ ಸಂಪಾದಕರಾಗಿಯೂ ರಂಗಭೂಮಿ ಹಾಗೂ ಪತ್ರಿಕಾಪ್ರಪಂಚದಲ್ಲಿಯೂ ದುಡಿದರು. ಕರ್ನಾಟಕ ವಿದ್ಯಾವರ್ಧಕ ಸಂಘದ ಆಜೀವ ಸದಸ್ಯರು. ೧೯೨೫ರಲ್ಲಿ ಬೆಳಗಾವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಹನ್ನೊಂದನೇ ಅಧಿವೇಶನದ ಅಧ್ಯಕ್ಷರಾಗಿದ್ದರು. ಪರಿಷತ್ತಿನ ಸ್ಥಾಪಕರಲ್ಲಿ ಒಬ್ಬರಾದ ಇವರು ಕನ್ನಡಿಗರ ಏಕೀಕರಣಕ್ಕೆ ಶ್ರಮಿಸಿದರು
ಗ್ರಂಥಗಳು
ಪರಿಷ್ಕೃತ
ಅಪ್ರಕಟಿತ
೧೯೩೯ರ ಮೇ ತಿಂಗಳ "ಕನ್ನಡ ನುಡಿ" ಪತ್ರಿಕೆಯಲ್ಲಿ ಶ್ರೀ. ದ. ಕೃ. ಭಾರಾದ್ವಾಜರು ರಾಮರಾಯರ ಬಗ್ಗೆ ಬರೆದ ಒಂದು ಲೇಖನ .